ಮುಂಗಾರು ಮಳೆ(2006)-ಅರಳುತಿರು ಜೀವದ ಗೆಳೆಯ

ಚಿತ್ರಗೀತೆ | ಜಯಂತ ಕಾಯ್ಕಿಣಿ | ಮುಂಗಾರು ಮಳೆ | ೨೦೦೬

ಸಂಗೀತ : ಮನೋಮೂರ್ತಿ
ಸಾಹಿತ್ಯ : ಜಯಂತ್ ಕೈಕಿಣಿ
ಗಾಯಕರು : ಶ್ರೆಯಾ

ಹೆಣ್ಣು : ಅರಳುತಿರು ಜೀವದ ಗೆಳೆಯ
ಸ್ನೇಹದ ಸಿಂಚನದಲ್ಲಿ
ಬಾಡದಿರು ಸ್ನೇಹದ ಹೂವೆ
ಪ್ರೇಮದ ಬಂಧನದಲ್ಲಿ
ಮನಸಲ್ಲೇ ಇರಲಿ ಭಾವನೆ
ಮಿಡಿಯುತಿರಲಿ ಮೌನವೀಣೆ
ಹೀಗೆ ಸುಮ್ಮನೆ
ಅರಳುತಿರು ಜೀವದ ಗೆಳೆಯ

ಹಕ್ಕಿಯು ಹಾಡಿದೆ
ತನ್ನ ಹೆಸರನು ಹೇಳದೆ
ಸಂಪಿಗೆ ಬೀರಿದೆ ಕಂಪನು
ಯಾರಿಗು ಕೇಳದೆ
ಬೀಸುವ ಗಾಳಿಯ ಹಕ್ಕಿಯ ಹಾಡಿನ
ನಂಟಿಗೆ ಹೆಸರಿನ ಹಂಗಿಲ್ಲ
ನಮಗೇಕೆ ಅದರ ಯೋಚನೆ
ಬೇಡ ಗೆಳಯ ನಂಟಿಗೆ ಹೆಸರು
ಯಾಕೇ ಸುಮ್ಮನೆ ಏ.ಏ..
ಅರಳುತಿರು ಜೀವದ ಗೆಳೆಯ

ಮಾತಿಗೆ ಮೀರಿದ
ಭಾವದ ಸೆಳೆತವೆ ಸುಂದರ
ನಲುಮೆಯು ತುಂಬಿದ
ಮನಸಿಗೆ ಬಾರದು ಬೇಸರ
ಬಾಳ ದಾರಿಯಲಿ ಬೇರೆ ಆದರು
ಚಂದಿರ ಬರುವನು ನಮ್ಮ ಜೊತೆ
ಕಾಣುವೆನು ಅವನಲಿ ನಿನ್ನನೇ
ಇರಲಿ ಗೆಳೆಯ ಈ ಅನುಬಂಧ
ಹೀಗೇ ಸುಮ್ಮನೆ

ಅರಳುತಿರು ಜೀವದ ಗೆಳೆಯ
ಸ್ನೇಹದ ಸಿಂಚನದಲ್ಲಿ
ಬಾಡದಿರು ಸ್ನೇಹದ ಹೂವೆ
ಪ್ರೇಮದ ಬಂಧನದಲ್ಲಿ
ಮನಸಲ್ಲೇ ಇರಲಿ ಭಾವನೆ
ಮಿಡಿಯುತಿರಲಿ ಮೌನವೀಣೆ
ಹೀಗೆ ಸುಮ್ಮನೆ
ಅರಳುತಿರು ಜೀವದ ಗೆಳೆಯ

its a heart touching one

This song is history this kind of song was not there in the kannada film industry... the feeling expressed in the lyrics are great and the right blend of music and shreyas voice is simply great.... every time i here this song i have a tears in my eyes... i miss my love whome i lost.....

ಯಾಕೆ ಸುಮ್ಮನೆ?

ಈ ಹಾಡು ಎಷ್ಟು ನಿರ್ಮಲವಾಗಿದೆ ಎಂದು ನಾನ್ಯಾಕೆ ಹೇಳಲಿ ಸುಮ್ಮನೆ... ಪದಗಳ್ಯಾಕೆ ಸುಮ್ಮನೆ...

ಬಾಲಾಜಿ