ಮುಂಗಾರು ಮಳೆ(2006)-ಇವನು ಗೆಳೆಯನಲ್ಲ
Submitted by kirankumar05 on Mon, 2007-01-08 22:42.
ಚಿತ್ರಗೀತೆ | ಮುಂಗಾರು ಮಳೆ | ೨೦೦೬
ಸಂಗೀತ : ಮನೋಮೂರ್ತಿ
ಸಾಹಿತ್ಯ : ಶಿವ
ಗಾಯಕರು : ಶ್ರೆಯಾ
ಹೆಣ್ಣು : ಇವನು ಗೆಳೆಯನಲ್ಲ
ಗೆಳತಿ ನಾನು ಮೊದಲೇ ಅಲ್ಲ
ಇವನು ಇನಿಯನಲ್ಲ
ತುಂಬ ಸನಿಹ ಬಂದಿಹನಲ್ಲ
ನೋವಿನಲ್ಲೂ ನಗುತಿಹನಲ್ಲ
ಯಾಕೆ ಈ ತರ
ಜಾಣ ಮನವೆ ಕೇಳು
ಜಾರಬೇಡ ಇವನಾ ಕಡೆಗೆ
ಯಾಕೆ ನಿನಗೆ ಸಲ್ಲದ ಸಲಿಗೆ
ಇರಲಿ ಅಂತರ
ಇವನು ಗೆಳೆಯನಲ್ಲ
ಗೆಳತಿ ನಾನು ಮೊದಲೇ ಅಲ್ಲ
ಅ.ಅ.ಆ.ಆ.
ಅ.ಅ.ಆ.ಆ
ಅ.ಅ.ಆ.ಆ
ಅ.ಅ.ಆ.ಆ
ಆ.ಆ..ಆ.ಆ
ಓಲವ ಹಾದಿಯಲ್ಲಿ
ಇವನು ನನಗೆ ಹೂವೋ ಮುಳ್ಳೊ
ಮನದ ಕಡಲಿನಲ್ಲಿ
ಇವನು ಅಲೆಯ ಭೀಕರ ಸುಳಿಯೊ
ಅರಿಯದಂತ ಹೊಸ ಕಂಪನವೊ
ಯಾಕೋ ಕಾಣೆನು
ಅರಿತು ಮರೆತು ಜೀವ
ವಾಲದಂತೆ ಇವನಾ ಕಡೆಗೆ
ಸೋಲದಂತೆ ಕಾಯಿ ಮನವೇ
ಒಲಿಸು ನನ್ನನು
ಇವನು ಇನಿಯನಲ್ಲ
ತುಂಬ ಸನಿಹ ಬಂದಿಹನಲ್ಲ
ತಿಳಿದು ತಿಳಿದು ಇವನು
ತನ್ನ ತಾನೇ ಸೋತಿಹನಲ್ಲ
ಒಲುಮೆ ಎಂಬ ಸುಳಿಗೆ
ಈಜು ಬರದೆ ಇಳಿದಿಹನಲ್ಲ
ಸಾವಿನಲ್ಲೂ ನಗುವುದ ಬಲ್ಲ
ಎನೋ ಕಳವಳ
ಮುಳುಗುವವನ ಕೂಗು
ಚಾಚುವಂತೆ ಮಾಡಿದೆ ಕೈಯ
ಜಾರಿ ಬಿಡುವುದೆ ಈ ಹೃದಯ
ಎನೋ ತಳಮಳ
ಇವನು ಇನಿಯನಲ್ಲ
ತುಂಬ ಸನಿಹ ಬಂದಿಹನಲ್ಲ
Recent comments
37 weeks 6 days ago
38 weeks 3 days ago
38 weeks 6 days ago
39 weeks 17 hours ago
48 weeks 6 days ago
50 weeks 12 hours ago
1 year 3 days ago
1 year 3 days ago
1 year 3 days ago
1 year 3 days ago