ಸೌಂದರ್ಯ (2007) - ಬೆಳಕಿನಿಂದ ಬಾನೆಲ್ಲ ಬಣ್ಣ

ಚಿತ್ರಗೀತೆ | ಶಾಸ್ತ್ರೀಯ | ಸೌಂದರ್ಯ | ಹಂಸಲೇಖ | ೨೦೦೭

ಸಂಗೀತ: ಹಂಸಲೇಖ
ಗಾಯನ:
ಯುಗಳ ಗೀತೆ: ಸೋನು ನಿಗಂ. ಚಿತ್ರ
ಸೋಲೋ: ಸೋನು ನಿಗಂ

ಬೆಳಕಿನಿಂದ ಬಾನೆಲ್ಲ ಬಣ್ಣ
ಬಳುಕಿನಿಂದ ಮನವೆಲ್ಲ ಬಣ್ಣ
ಮುಟ್ಟಲಾರೆ ಮುಟ್ಟಲಾರೆ ನಿನ್ನೀ ಲಾವಣ್ಯವ
ಸೌಂದರ್ಯ ಸೌಂದರ್ಯ ನಾ ಸವಿಯೋ ಸೌಂದರ್ಯ
ಸೌಂದರ್ಯ ಸೌಂದರ್ಯ ನಾ ಸವಿಯೋ ಸೌಂದರ್ಯ
ಇದೇ ರಸಕಾವ್ಯ ಇದೇ ರಸಮೈತ್ರಿ
ಇದೇ ರಸಗಾಯನ ಇದೇ ರಸಚಂದನ
ಸೌಂದರ್ಯ ಸೌಂದರ್ಯ ನಾ ಸವಿಯೋ ಸೌಂದರ್ಯ

ಆ.. ಆ.. ಆ..
ಸಸನಿಸ ರಿಮರಿಸ ರಿಮಪಪ
ರಿಮನಿದಪ
ಮಪನಿಸರಿ
ನಿಸರಿರಿರಿರಿ ರಿರಿರಿರಿ
ರಿಸರಿಸ ಮಪನಿಪ ನಿಸನಿಸ
ಆ.. ಆ.. ಆ.. ಆ..
ನಿರಿಸ ನಿರಿಸ

ಅಂತರಂಗದಿಂದ ನನ್ನ ಅರಸಿ ಬಂದ
ನಿನ್ನ ಪ್ರೀತಿಯೆಂಬ ಕಣ್ಣ ಬೆಳಕಿನಿಂದ
ಸ್ನಾನ ಮಾಡಿತೆನ್ನ ಮನವು
ಧನ್ಯವಾಯಿತೆನ್ನ ತನುವು
ಹೃದಯ ಅರಿಯಿತು ಹೃದಯದ ಆಂತರ್ಯ
ಜೀವ ಸವಿಯಿತು ಪ್ರಣಯದ ಕೈಂಕರ್ಯ
ಸೌಂದರ್ಯ ಸೌಂದರ್ಯ ನಾ ಸವಿಯೋ ಸೌಂದರ್ಯ

ಬಿಟ್ಟ ಕಣ್ಣಿನಲ್ಲಿ ಬೆಳಕನೂಡುತಿರುವ
ರೆಪ್ಪೆಯಲುಗದ ಈ ಪುಷ್ಪಲೋಕದಲ್ಲಿ
ಕಣ್ಣಿನಲ್ಲೇ ಕಾಡೋ ಪುಷ್ಪ ನೀ
ಕಾಣದ ಪ್ರೀತಿಯ ಭಾಷೆ ನೀ
ಪ್ರೀತಿ ತುಂಬಿದೆ ನಿನ್ನ ಕಣ್ಣಿನಲೀ
ಜೀವ ಮಿಂದಿದೆ ನಿನ್ನ ಪ್ರೀತಿಯಲೀ
ಬೆಳಕಿನಿಂದ ಬಾನೆಲ್ಲ ಬಣ್ಣ
ಬಳುಕಿನಿಂದ ಮನವೆಲ್ಲ ಬಣ್ಣ
ಮುಟ್ಟಲಾರೆ ಮುಟ್ಟಲಾರೆ ನಿನ್ನೀ ಲಾವಣ್ಯವ
ಸೌಂದರ್ಯ ಸೌಂದರ್ಯ ನಾ ಸವಿಯೋ ಸೌಂದರ್ಯ
ಇದೇ ರಸಕಾವ್ಯ ಇದೇ ರಸಮೈತ್ರಿ
ಇದೇ ರಸಗಾಯನ ಇದೇ ರಸಚಂದನ
ಸೌಂದರ್ಯ ಸೌಂದರ್ಯ ನಾ ಸವಿಯೋ ಸೌಂದರ್ಯ
ಸೌಂದರ್ಯ ಸೌಂದರ್ಯ ನಾ ಸವಿಯೋ ಸೌಂದರ್ಯ