ಪಾಲಿಸೆ ಎನ್ನ ಮುದ್ದು ಶಾರದೇ
Submitted by Anjan on Tue, 2007-09-18 04:19.
ಪುರಂದರದಾಸ | ಶಾಸ್ತ್ರೀಯ
ರಾಗ: ಮಧುವಂತಿ
ತಾಳ: ಆದಿತಾಳ
ಪಾಲಿಸೆ ಎನ್ನ ಮುದ್ದು ಶಾರದೇ , ಎನ್ನ
ನಾಲಿಗೆಯಲಿ ನಿಲ್ಲಬಾರದೇ ||
ಲೋಲಲೋಚನೆ ತಾಯೇ ನಿರತ ನಂಬಿದೆ ನಿನ್ನ (೨)
ನಾಲಿಗೆಯಲಿ ನಿಲ್ಲಬಾರದೇ ||
ಅಕ್ಷರಾಕ್ಷರ ವಿವೇಕದ ನಿನ್ನ
ಕುಕ್ಷಿಯೋಳೀರೇಳು ಲೋಕವಾ
ಸಾಕ್ಷಾತ್ ರೂಪದಿಂದ ಒಲಿದು ರಕ್ಷಿಸು ತಾಯೆ
ಶೃಂಗೇರಿ ಪುರವಾಸಿನೀ ದೇವಿ
ಸಂಗೀತ ಗಾನವಿಲಾಸಿನೀ
ಮಂಗಳ ಗಾತ್ರಳೇ ಭಳಿರೆ ಬ್ರಹ್ಮನ ರಾಣಿ
ಸರ್ವಾಲಂಕಾರ ದಯಾ ಮೂರುತಿ
ನಿನ್ನ ಸ್ತುತಿಸುವೆ ಕೀರುತಿ
ಗುರುಮೂರ್ತಿ ಪುರಂದರ ವಿಠಲನಾ ಸ್ತುತಿಸುವೆ
» 827 reads
Recent comments
7 weeks 1 day ago
7 weeks 5 days ago
8 weeks 5 days ago
9 weeks 2 days ago
10 weeks 8 hours ago
10 weeks 1 day ago
11 weeks 3 days ago
11 weeks 3 days ago
12 weeks 4 days ago
12 weeks 4 days ago