ಹಾಡು ಕೋಗಿಲೆ.......................ಯಾವುದೀ ಹೊಸ ಸಂಚು
ಸಾಹಿತ್ಯ : ಡಾ.ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟ
ಸಂಗೀತ : ಸಿ.ಅಶ್ವತ್ಥ್
ಗಾಯನ : ಸುಲೋಚನ
ಯಾವುದೀ ಹೊಸ ಸಂಚು ಎದೆಯಂಚಿನಲಿ ಮಿಂಚಿ
ಯಾವುದೀ ಹೊಸ ಸಂಚು ಎದೆಯಂಚಿನಲಿ ಮಿಂಚಿ
ಮನಸು ಕನಸುಗಳನ್ನು ಕಲೆಸಿರುವುದು
ಗಿರಿಕಮರಿ ಆಳದಲಿ ತೆವಳಿದ್ದ ಭಾವಗಳ
ಮುಗಿಲ ಮಂಚದಲಿಟ್ಟು ತೂಗುತಿಹುದು
ಯಾವುದೀ ಹೊಸ ಸಂಚು ಎದೆಯಂಚಿನಲಿ ಮಿಂಚಿ
ಅತ್ತ ಬಾಳಿಗೆ ಮತ್ತೆ ಅಮೃತವೆರೆದು
ಕತ್ತಲಾಳಗಳಲ್ಲಿ ದೀಪ ಉರಿದು
ಅತ್ತ ಬಾಳಿಗೆ ಮತ್ತೆ ಅಮೃತವೆರೆದು
ಕತ್ತಲಾಳಗಳಲ್ಲಿ ದೀಪ ಉರಿದು
ಹಾಳು ಕೊನೆ ಏರುತಿದೆ ಬೆಳಕಿನುತ್ಸವದಲ್ಲಿ
ಹಾಳು ಕೊನೆ ಏರುತಿದೆ ಬೆಳಕಿನುತ್ಸವದಲ್ಲಿ
ಮೈಯ ಕಣಕಣದಲ್ಲು ದಿಕ್ಕು ಉರಿದು
ಯಾವುದೀ ಹೊಸ ಸಂಚು ಎದೆಯಂಚಿನಲಿ ಮಿಂಚಿ
ಹೇಗೆ ತಾಳಲಿ ಹೇಳೆ ಈ ಮಧುರ ಅನುಭವವ
ಕಲ್ಪವೃಕ್ಷದ ಹಣ್ಣು ಇಳಿದ ರುಚಿಯ
ಹೇಗೆ ತಾಳಲಿ ಹೇಳೆ ಈ ಮಧುರ ಅನುಭವವ
ಕಲ್ಪವೃಕ್ಷದ ಹಣ್ಣು ಇಳಿದ ರುಚಿಯ
ಹೇಗೆ ತಾಳಲಿ ಹೇಳೆ ಇಂಥ ಭಾವವೆ ನಾಳೆ
ಹೇಗೆ ತಾಳಲಿ ಹೇಳೆ ಇಂಥ ಭಾವವೆ ನಾಳೆ
ಉಳಿಯದೆಯೇ ಸವಿದೀಯ ಎಂವ ವ್ಯಥೆಯ
ಯಾವುದೀ ಹೊಸ ಸಂಚು ಎದೆಯಂಚಿನಲಿ ಮಿಂಚಿ
ಯಾವುದೀ ಹೊಸ ಸಂಚು ಎದೆಯಂಚಿನಲಿ ಮಿಂಚಿ
Recent comments
7 weeks 1 day ago
7 weeks 5 days ago
8 weeks 5 days ago
9 weeks 2 days ago
10 weeks 8 hours ago
10 weeks 1 day ago
11 weeks 3 days ago
11 weeks 3 days ago
12 weeks 4 days ago
12 weeks 4 days ago