ಚೆಲ್ಲಿದರೂ ಮಲ್ಲಿಗೆಯಾ (ಜಾನಪದಭಕ್ತಿಗೀತೆ)......................ಕಾಶಾಯ ಉಟ್ಟವನೆ
ಸಂಗೀತ : ಸಾಧು
ಗಾಯನ : ನರಸಿಂಹನಾಯಕ್ ಮತ್ತು ಸುರೇಖಾ
ನರಸಿಂಹನಾಯಕ್:
ಕಾಶಾಯ ಉಟ್ಟವನೆ ಹುಲುಯೇರಿ ಬರುತವ್ನೆ
ರುದ್ರಾಕ್ಷಿ ಮಾಲೆ ತೊಟ್ಟವನೆ ಮಾದಯ್ಯ ಸ್ವಾಮಿ ಬಂದವ್ನೆ
ಕಾಶಾಯ ಉಟ್ಟವನೆ ಹುಲುಯೇರಿ ಬರುತವ್ನೆ
ರುದ್ರಾಕ್ಷಿ ಮಾಲೆ ತೊಟ್ಟವನೆ ಮಾದಯ್ಯ ಸ್ವಾಮಿ ಬಂದವ್ನೆ
ಸುರೇಖಾ:
ಮಂಗ್ಳ ಗುಡಿ ಸಿರಿಯಿಂದ ರಂಗೋಲಿ ಹಿಡಿರಿಂದ
ಮಾಸ್ವಾಮಿ ಬಂದವ್ನೆ
ನರಸಿಂಹನಾಯಕ್:
ಮಂದಾರ ಮಲ್ಲೆಯ ಹಾರವಾ ತನ್ನಿರೆ
ಮಂದಾರ ಮಲ್ಲೆಯ ಹಾರವಾ ತನ್ನಿರೆ
ಸ್ವಾಮಿಯ ಪಾದಕ್ಕೆ ಇರಿಸೋಣ
ಸ್ವಾಮಿಯ ಪಾದಕ್ಕೆ ಇರಿಸೋಣ
ಕಾಶಾಯ ಉಟ್ಟವನೆ ಹುಲುಯೇರಿ ಬರುತವ್ನೆ
ರುದ್ರಾಕ್ಷಿ ಮಾಲೆ ತೊಟ್ಟವನೆ ಮಾದಯ್ಯ ಸ್ವಾಮಿ ಬಂದವ್ನೆ
ಸುರೇಖಾ:
ಜಗಬೆಳಗೋ ಜಗದೀಶ ಹರನಾವರ ಫಲನೀತ
ನಮ್ಮ ಮನೆಗೀಗ ಬಂದವ್ನೆ
ನರಸಿಂಹನಾಯಕ್:
ಮಣೆ ಹಾಕಿ ಕುಳ್ಳಿರಿಸಿ ಮನಸಾರೆ ಪೂಜಿಸಿ
ಮಣೆ ಹಾಕಿ ಕುಳ್ಳಿರಿಸಿ ಮನಸಾರೆ ಪೂಜಿಸಿ
ಶುಭಕರನ ಸೇವೇಯಾ ಮಾಡೋಣ
ಶುಭಕರನ ಸೇವೇಯಾ ಮಾಡೋಣ
ಕಾಶಾಯ ಉಟ್ಟವನೆ ಹುಲುಯೇರಿ ಬರುತವ್ನೆ
ರುದ್ರಾಕ್ಷಿ ಮಾಲೆ ತೊಟ್ಟವನೆ ಮಾದಯ್ಯ ಸ್ವಾಮಿ ಬಂದವ್ನೆ
ಸುರೇಖಾ:
ಗಂಧ ಚಂದನ ತನ್ನಿ ಭಕ್ತರ ಮನೆಗಿನ್ನು
ಯತಿ ರೂಪಿ ಶಿವ ಮನೆಗೆ ಬಂದವ್ನೆ
ನರಸಿಂಹನಾಯಕ್:
ಓಂಕಾರದಲೆಯಲ್ಲಿ ಮಾದಯ್ಯ ಬೆರೆತವ್ನೆ
ಶಿವನಾಮ ನಿರತ ಹಾಡೀರೆ
ಶಿವನಾಮ ನಿರತ ಹಾಡೀರೆ
ಕಾಶಾಯ ಉಟ್ಟವನೆ ಹುಲುಯೇರಿ ಬರುತವ್ನೆ
ರುದ್ರಾಕ್ಷಿ ಮಾಲೆ ತೊಟ್ಟವನೆ ಮಾದಯ್ಯ ಸ್ವಾಮಿ ಬಂದವ್ನೆ
Recent comments
6 weeks 5 days ago
7 weeks 2 days ago
8 weeks 2 days ago
9 weeks 4 hours ago
9 weeks 4 days ago
9 weeks 5 days ago
11 weeks 14 hours ago
11 weeks 15 hours ago
12 weeks 2 days ago
12 weeks 2 days ago