ಜನಪದ.....ಎಂಥವನಿರಬೇಕಾ ಯವ್ವಾ

ಜನಪದ

ಗಾಯನ : ಬಿ.ಕೆ.ಸುಮಿತ್ರಾ

ಎಂಥವನಿರಬೇಕಾ ಯವ್ವಾ ಎಂಥವನಿರಬೇಕಾ
ಎಂಥವನಿರಬೇಕಾ ಯವ್ವಾ ಎಂಥವನಿರಬೇಕಾ
ನಾನು ಮೆಚ್ಚಿ ಮಾಡುವ್ಯಾಗುವ ಗಂಡ ಎಂಥವನಿರಬೇಕಾ
ಎಂಥವನಿರಬೇಕಾ ಯವ್ವಾ ಎಂಥವನಿರಬೇಕಾ

ಚುಕ್ಕೀಯ ನಡುವೆ ಚoದ್ರಮನoಥ ಚಂದನ ಮುಖ ಬೇಕಾ
ಚುಕ್ಕೀಯ ನಡುವೆ ಚoದ್ರಮನoಥ ಚಂದನ ಮುಖ ಬೇಕಾ
ಮಾರಿಮ್ಯಾಲೆ ಹೋರಿ ಮೀಸೆ ಹುರಿ ಮಾಡಿ ತಿರುಗಿಸಿ
ಏಸಿ ನಿಂತಿರಬೇಕಾ
ನೋಡಿದವರ ಎದೆಯೂ ನಡುಗಬೇಕಾ
ನನ್ನ ಗಂಡ ಇಂಥ ವನಿರಬೇಕಾ
ಎಂಥವನಿರಬೇಕಾ ಯವ್ವಾ ಎಂಥವನಿರಬೇಕಾ
ನಾನು ಮೆಚ್ಚಿ ಮಾಡುವ್ಯಾಗುವ ಗಂಡ ಎಂಥವನಿರಬೇಕಾ
ಎಂಥವನಿರಬೇಕಾ ಯವ್ವಾ ಎಂಥವನಿರಬೇಕಾ

ಊರ ಮುಂದಿನ ಹೊಲಕ ಹೊಸ ಹೋರಿ ಹುಡಿರoಟಿಯ ಹೊಡಿಬೇಕಾ
ಭಂಟ ಒಬ್ಬನೇ ಇರಬೇಕಾ ಸೊಂಟ ಕಟ್ಟು ಬಿದ್ದಿರಬೇಕಾ
ಸ್ಠಿತಿಗತಿ ತಿಳಿದುಕೊಂಡು ಪತಿಯ ಹೋಗದಂತೆ ಬಿತ್ತುತ್ತಲಿರಬೇಕಾ
ಎದಿ ಉದ್ದ ಜ್ವಾಳ ಬೆಳೆಯಬೇಕಾ
ಜ್ವಾಳದ ನಡುವಿ ನಿಂತು ಅವನು ಹಕ್ಕಿ ಹೊಡೆಯಬೇಕಾ
ಆಗದಿದ್ರ ಹೋಗಿ ಹಾಕಬೇಕಾ
ಎಂಥವನಿರಬೇಕಾ ಯವ್ವಾ ಎಂಥವನಿರಬೇಕಾ
ನಾನು ಮೆಚ್ಚಿ ಮಾಡುವ್ಯಾಗುವ ಗಂಡ ಎಂಥವನಿರಬೇಕಾ
ಎಂಥವನಿರಬೇಕಾ ಯವ್ವಾ ಎಂಥವನಿರಬೇಕಾ

ಹೊತ್ತಾಗಿ ನಾನು ಬುತ್ತಿಯ ಹೊತ್ತುಕೊಂಡು ಮೆತ್ತಗೆ ಹೋಗಬೇಕಾ
ಮೆಲ್ಲನೆ ಅವನ ಕೂಗಬೇಕಾ ಅದಕೆ ಓಗುಡತಿರಬೇಕಾ
ಹಾಲು ಸಕ್ಕರೆಯoಥ ಸಂಸಾರ ನಮ್ಮದಾಗಬೇಕಾ
ಅದಕೆ ಶಿವನ ಕರುಣೆಬೇಕಾ
ನನ್ನ ಗಂಡ ಇಂಥವನಿರಬೇಕಾ
ಎಂಥವನಿರಬೇಕಾ ಯವ್ವಾ ಎಂಥವನಿರಬೇಕಾ
ಎಂಥವನಿರಬೇಕಾ ಯವ್ವಾ ಎಂಥವನಿರಬೇಕಾ
ನಾನು ಮೆಚ್ಚಿ ಮಾಡುವ್ಯಾಗುವ ಗಂಡ ಎಂಥವನಿರಬೇಕಾ
ಎಂಥವನಿರಬೇಕಾ ಯವ್ವಾ ಎಂಥವನಿರಬೇಕಾ