ನಗಲಾರದೆ.... ಅಳಲಾರದೆ....
ಚಿತ್ರ : ಶ್ರುತಿ ಸೇರಿದಾಗ
ರಚನೆ: ಚಿ. ಉದಯಶಂಕರ್
ಸಂಗೀತ: ಟಿ. ಜಿ. ಲಿಂಗಪ್ಪ
ಗಾಯಕರು: ಡಾ. ರಾಜಕುಮಾರ್
ವರ್ಷ: 1987
ನಗಲಾರದೆ.... ಅಳಲಾರದೆ.... ತೊಳಲಾಡಿದೆ ಜೀವ
ನಗಲಾರದೆ.... ಅಳಲಾರದೆ.... ತೊಳಲಾಡಿದೆ ಜೀವ
ಬರಿ ಮಾತಲಿ... ಹೇಳಲಾಗದೆ ಮನದಾಳದ ನೋವ....
ದಿನಕೊಂದು ಬಣ್ಣ, ಕ್ಷಣಕೊಂದು ಬಣ್ಣ
ಏನೇನೊ ವೇಷ, ಮಾತಲ್ಲಿ ಮೋಸ...
ದಿನಕೊಂದು ಬಣ್ಣ, ಕ್ಷಣಕೊಂದು ಬಣ್ಣ
ಏನೇನೊ ವೇಷ, ಮಾತಲ್ಲಿ ಮೋಸ...
ಆ ಮಾತನೆಲ್ಲ ನಿಜವೆಂದು ನಂಬಿ
ಆ ಮಾತನೆಲ್ಲ ನಿಜವೆಂದು ನಂಬಿ
ಮನದಾಸೆಯೆ... ಮಣ್ಣಾಯಿತೆ....
ಮನದಾಸೆಯೆ... ಮಣ್ಣಾಯಿತೆ....
ಮನ ನೆಮ್ಮದಿ ದೂರಯಿತೆ...
ನಗಲಾರದೆ.... ಅಳಲಾರದೆ.... ತೊಳಲಾಡಿದೆ ಜೀವ....
ನಿಜವಾದ ಪ್ರೇಮ, ನಿಜವಾದ ಸ್ನೇಹ
ಅನುರಾಗವೇನೊ ಬಲ್ಲೋರು ಇಲ್ಲ....
ನಿಜವಾದ ಪ್ರೇಮ, ನಿಜವಾದ ಸ್ನೇಹ
ಅನುರಾಗವೇನೊ ಬಲ್ಲೋರು ಇಲ್ಲ....
ಬಾಳಲಿ ನಟನೆ ಹೀಗೇಕೊ ಕಾಣೆ..
ಬಾಳಲಿ ನಟನೆ ಹೀಗೇಕೊ ಕಾಣೆ..
ಬದುಕಲ್ಲಿಯೆ ಹುಡುಗಾಟವೆ...
ಬದುಕಲ್ಲಿಯೆ ಹುಡುಗಾಟವೆ...
ಈ ಆಟಕೆ ಕೊನೆಯಿಲ್ಲವೆ...
ನಗಲಾರದೆ.... ಅಳಲಾರದೆ.... ತೊಳಲಾಡಿದೆ ಜೀವ
ಬರಿ ಮಾತಲಿ... ಹೇಳಲಾಗದೆ ಮನದಾಳದ ನೋವ....
Recent comments
37 weeks 6 days ago
38 weeks 3 days ago
38 weeks 6 days ago
39 weeks 17 hours ago
48 weeks 6 days ago
50 weeks 12 hours ago
1 year 3 days ago
1 year 3 days ago
1 year 3 days ago
1 year 3 days ago