ಅತಿ ಅಪರೂಪ ಅವಳ ರೂಪ........... ಜನುಮ ಜನುಮದಲ್ಲೂ
Submitted by Guru.M.Shetty on Mon, 2009-12-14 05:08.
ಕವಿರಾಜ್ | ಚಿತ್ರಗೀತೆ
ಚಿತ್ರ : ಜನುಮ ಜನುಮದಲ್ಲೂ
ವರ್ಷ: 2009
ಸಂಗೀತ : ಮನೋಮೂರ್ತಿ
ಸಾಹಿತ್ಯ : ಕವಿರಾಜ್
ಗಾಯನ : ಸೋನು ನಿಗಮ್
ಅತಿ ಅಪರೂಪ ಅವಳ ರೂಪ
ಮಿನುಮಿನುಗೊ ಆ ಕಣ್ಣ ದೀಪ
ಎಳೆಯ ಮಿಂಚ ಸಾಲು
ಕೈಯ ಬೆರಳ ಗೊಂಚಲು
ಹವಳ ಬೆಳೆವ ತೋಟದಂತೆ
ಕಡುಗೆಂಪು ತುಟಿಗಳು
ತಿದ್ದಿ ತೀಡಿದ ಶಿಲ್ಪ, ಅಂಗ ಅಂಗವು
ಎಂಥ ಮಾಟವು, ದಂತದಂಥ ದೇಹವು... || ಅತಿ ಅಪರೂಪ ||
ಅತಿ ಅಪರೂಪ ಅವಳ ರೂಪ
ಮಿನುಮಿನುಗೊ ಆ ಕಣ್ಣ ದೀಪ
ಪಾದ ಊರಿದಲ್ಲಿ ರಂಗವಲ್ಲಿ ಅರಳಿದೆ,
ಕೊಂಚ ಸ್ಪರ್ಷ ಸೋಕಿದಲ್ಲಿ
ಮದರಂಗಿ ಮೂಡಿದೆ,
ನಗುವ ಸೊಬಗನು ನೋಡಿ ಬೆಳ್ಳಿಮೋಡವು
ಮೂರ್ಛೆ ಹೋದವು, ಅಸದಳ ಆ ಅಂದವು.... || ಅತಿ ಅಪರೂಪ ||
ಅತಿ ಅಪರೂಪ ಅವಳ ರೂಪ
ಮಿನುಮಿನುಗೊ ಆ ಕಣ್ಣ ದೀಪ
ಮೈಯ ನುಣುಪು ಕಂಡು
ರೇಷಿಮೆಗೂ ಬೇಸರ,
ಅವಳು ಮುಡಿಯೆ ಚೆಂಗುಲಾಬಿ
ಮಲ್ಲಿಗೆಗೆ ಮತ್ಸರ,
ಕೆಂಪು ಕೆನ್ನೆಯ ಕಂಡು ಸಂಜೆ ನೇಸರ,
ಬಿಟ್ಟು ಅಂಬರ, ಸರಿದು ಹೋದ ಸರಸರ.... || ಅತಿ ಅಪರೂಪ ||
Recent comments
37 weeks 6 days ago
38 weeks 3 days ago
38 weeks 6 days ago
39 weeks 17 hours ago
48 weeks 6 days ago
50 weeks 12 hours ago
1 year 3 days ago
1 year 3 days ago
1 year 3 days ago
1 year 3 days ago