ಆಟೋ ರಾಜ (1980) - ನಲಿವ ಗುಲಾಬಿ ಹೂವೆ
Submitted by DeepakGowda on Tue, 2006-01-31 12:57.
ಆಟೋ ರಾಜ | ಚಿತ್ರಗೀತೆ | ೧೯೮೦
ಸಾಹಿತ್ಯ : ???
ಸಂಗೀತ: ರಾಜನ್-ನಾಗೇಂದ್ರ
ಗಾಯನ: ಎಸ್.ಪಿ. ಬಾಲಸುಬ್ರಮಣ್ಯಂ
ರಾಗ: ಶಿವರಂಜನಿ (ಹಿಂದುಸ್ತಾನಿ)
ನಲಿವ ಗುಲಾಬಿ ಹೂವೆ ಮುಗಿಲಾ ಮೇಲೇರಿ ನಗುವೆ
ನಿನಗೆ ನನ್ನಲ್ಲಿ ಒಲವು ಅರಿಯೆ ನನ್ನಲ್ಲಿ ಛಲವೋ
ನಲಿವ ಗುಲಾಬಿ ಹೂವೆ
ಒಲವೋ ಛಲವೋ ಒಲವೋ ಛಲವೋ
ಸುಳಿದೆ ತಂಗಾಳಿಯಂತೆ ನುಡಿದೆ ಸಂಗೀತದಂತೆ
ಒಲವಿನ ಬಲೆಯಲಿ ಸೆಳೆಯುತ ಕುಣಿದೆ
ಸೊಗಸಾಗಿ ಹಿತವಾಗಿ
ಮನವ ನೀ ಸೇರಲೆಂದೆ ಬಯಕೆ ನೂರಾರು ತಂದೆ
ಬಯಸದೆ ಬಳಿಯಲಿ ಸುಳಿಯುತ ಒಲಿದೆ
ಇಂದೇಕೆ ದೂರಾದೆ
ಬಯಸದೆ ಬಳಿಯಲಿ ಸುಳಿಯುತ ಒಲಿದೆ
ಇಂದೇಕೆ ದೂರಾದೆ ಹೀಗೇಕೆ ಮರೆಯಾದೆ
ಸುಮವೇ ನೀ ಬಾಡದಂತೆ ಬಿಸಿಲಾ ನೀ ನೋಡದಂತೆ
ನೆರಳಲಿ ಸುಖದಲಿ ನಗುತಿರು ಚೆಲುವೆ
ಎಂದೆಂದು ಎಂದೆಂದು
ಇರು ನೀ ಹಾಯಾಗಿ ಹೀಗೆ ಇರಲಿ ನನಗೆಲ್ಲ ಬೇಗೆ
ಕನಸಲಿ ನೋಡಿದ ಸಿರಿಯನು ಮರೆವೆ ನಿನಗಾಗಿ ನನಗಾಗಿ
ಕನಸಲಿ ನೋಡಿದ ಸಿರಿಯನು ಮರೆವೆ ನಿನಗಾಗಿ ನನಗಾಗಿ
ನಿನಗಾಗಿ ನನಗಾಗಿ
» 2062 reads
Recent comments
6 weeks 2 days ago
6 weeks 6 days ago
8 weeks 3 min ago
8 weeks 4 days ago
9 weeks 1 day ago
9 weeks 2 days ago
10 weeks 4 days ago
10 weeks 4 days ago
11 weeks 6 days ago
11 weeks 6 days ago