ಒಲವರಳಿದ ಆ ದಿನಗಳೇ...
Submitted by samyuktha on Tue, 2010-07-13 03:32.
ಭಾವಗೀತೆ
ಒಲವರಳಿದ ಆ ದಿನಗಳೇ ಹೂಗಳೇ
ಕಡಲ ತೀರಗಳೇ ಕಾಡದಿರಿ|
ಬೆಳದಿಂಗಳು ತುಳುಕಾಡುವಾ ಹೊಳೆಗಳೇ
ಹಲವು ಬಣ್ಣಗಳೇ ಕಾಡದಿರಿ ||
ಜಲವಿಲ್ಲದ ಈ ಭೂಮಿಯ ಮೇಲೆ
ಸಾವು ಹಸಿವುಗಳೇ ಅಲೆಯದಿರಿ|
ಬಲವಿಲ್ಲದ ಈ ಬಳ್ಳಿಯ ಮೇಲೆ
ಘೋರ ವ್ರುಕ್ಷಗಳೇ ಎರಗದಿರಿ||
ಬಾಳ ರಮ್ಯತೆಯ ಚಿಮ್ಮಿಸಿ ಹಾರುವ
ಹಳದಿ ಚಿಟ್ಟೆಗಳೇ ಕಾಡದಿರಿ|
ಆವ ಬನದಲ್ಲೂ ಉತ್ತರವಿಲ್ಲದ
ಒಡೆಯದ ಒಗಟೇ ಕಾಡದಿರಿ||
ಪ್ರಾಣದ ಹರಣದ ಘಳಿಗೆಯ ಒಳಗೆ
ನೀಲಿ ತಾವರೆ ಅರಳದಿರಿ|
ಎಲ್ಲೆಲ್ಲು ತುಂಬಿದ ನೋವಿನ ಒಳಗೆ
ಗುಲಾಬಿ ವನಗಳೇ ಸುಳಿಯದಿರಿ||
» 119 reads
Recent comments
7 weeks 1 day ago
7 weeks 5 days ago
8 weeks 5 days ago
9 weeks 2 days ago
10 weeks 8 hours ago
10 weeks 1 day ago
11 weeks 3 days ago
11 weeks 3 days ago
12 weeks 4 days ago
12 weeks 4 days ago