ಬಂಧನ (1984) - ನೂರೊಂದು ನೆನಪು ಎದೆಯಾಳದಿಂದ

ಚಿ. ಉದಯಶಂಕರ್ | ಚಿತ್ರಗೀತೆ | ಬಂಧನ | ೧೯೮೪

ಸಾಹಿತ್ಯ : ಚಿ.ಉದಯಶಂಕರ್
ಸಂಗೀತ : ಎಂ.ರಂಗರಾವ್
ಗಾಯನ : ಎಸ್.ಪಿ.ಬಾಲಸುಬ್ರಮಣ್ಯಂ
ಹಾಡು ಕೇಳಿ

ನೂರೊಂದು ನೆನಪು ಎದೆಯಾಳದಿಂದ
ಹಾಡಾಗಿ ಬಂತು ಆನಂದದಿಂದ
ಸಿಂಧೂರ ಬಿಂದು ನಗಲಮ್ಮ ಎಂದು
ಎಂದೆಂದು ಇರಲಮ್ಮ ಈ ದಿವ್ಯ ಬಂಧ
ನೂರೊಂದು ನೆನಪು ಎದೆಯಾಳದಿಂದ
ಹಾಡಾಗಿ ಬಂತು ಆನಂದದಿಂದ

ಒಲವೆಂಬ ಲತೆಯು ತಂದಂತ ಹೂವು
ಮುಡಿಯೇರೆ ನಲಿವು ಮುಡಿಜಾರೆ ನೊವು
ಕೈಗೂಡಿದಾಗ ಕಂಡಂತ ಕನಸು
ಅದೃಷ್ಟದಾಟ ತಂದಂತ ಸೊಗಸು
ಪ್ರೀತಿ ನಗುತಿರಲಿ ಬಾಳು ಬೆಳಗಿರಲಿ
ಪ್ರೀತಿ ನಗುತಿರಲಿ ಬಾಳು ಬೆಳಗಿರಲಿ
ನೀವೆಂದು ಇರಬೆಕು ಸಂತೋಷದಿಂದ

ನೂರೊಂದು ನೆನಪು ಎದೆಯಾಳದಿಂದ
ಹಾಡಾಗಿ ಬಂತು ಆನಂದದಿಂದ

ತುಟಿಮೇಲೆ ಬಂದಂತ ಮಾತೊಂದೆ ಒಂದು
ಎದೆಯಲ್ಲಿ ಉಳಿದಿದ್ದು ಮುನ್ನೂರ ಒಂದು
ಮೂರು ಗಂಟಲ್ಲಿ ಈ ಬಾಳ ನಂಟು
ಕೇಳಿ ಪಡೆದಾಗ ಸಂತೊಷ ಉಂಟು
ನಿಮ್ಮ ಹರುಷದಲಿ ನನ್ನ ಹುಸಿರಿರಲಿ
ನಿಮ್ಮ ಹರುಷದಲಿ ನನ್ನ ಹುಸಿರಿರಲಿ
ನನ್ನೆಲ್ಲ ಹಾರೈಕೆ ಈ ಹಾಡಿನಿಂದ

ನೂರೊಂದು ನೆನಪು ಎದೆಯಾಳದಿಂದ
ಹಾಡಾಗಿ ಬಂತು ಆನಂದದಿಂದ