ಗೀತಾ (1981) - ಜೊತೆಯಲಿ ಜೊತೆ ಜೊತೆಯಲಿ

ಗೀತಾ | ಚಿ. ಉದಯಶಂಕರ್ | ಚಿತ್ರಗೀತೆ | ೧೯೮೧


ಸಂಗೀತ ನಿರ್ದೇಶಕ: ಇಳಯರಾಜ
ರಚನೆ: ಚಿ| ಉದಯಶಂಕರ್
ಗಾಯನ: ಎಸ್.ಪಿ.ಬಿ ಹಾಗು ಎಸ್. ಜಾನಕಿ

[ಗಂಡು]
ಜೊತೆಯಲಿ ಜೊತೆ ಜೊತೆಯಲಿ ಇರುವೆನು ಹೀಗೇ ಎಂದು
ಜೊತೆ ಜೊತೆಯಲಿ ಇರುವೆನು ಹೀಗೆ ಎಂದು
ಹೊಸ ಹರುಷವ ತರುವೆನು ಇನ್ನು ಎಂದು
[ಹೆಣ್ಣು]
ಎಂಥ ಮಾತಾಡಿದೆ ಇಂದು ನೀ ಎಂಥ ಮಾತಾಡಿದೆ
ನನ್ನ ಮನಸಿನ ಭಾವನೆ ನೀನೆ ಹೇಳಿದೆ
ಜೊತೆಯಲಿ ಜೊತೆ ಜೊತೆಯಲಿ ಇರುವೆನು ಹೀಗೇ ಎಂದು
[ಗಂಡು]
ಆssss ಆssss....

ಪ್ರೀತಿ ಎಂದರೇನುಯೆಂದು ಈಗ ಅರಿತೆನು ||2||
ಸವಿ ನುಡಿಯಲಿ ತನು ಅರಳಿತು
ಸವಿಗನಸಲಿ ಮನ ಕುಣಿಯಿತು
ಒಲವಿನ ಈ ಮಾತಿಗೆ ಕರಗಿ ಹೋದೆ ನೋಟಕೆ
ಕೊಡುವೆ ನಿನಗೆ ಬಾ ಪ್ರೀತಿ ಕಾಣಿಕೆ

[ಹೆಣ್ಣು]
ಜೊತೆಯಲಿ ಜೊತೆ ಜೊತೆಯಲಿ ಇರುವೆನು ಹೀಗೇ ಎಂದು

ಮೋಡದಲ್ಲಿ ಜೋಡಿಯಾಗಿ ತೇಲಿ ನಲಿಯುವ ||೨||
ಹಾರಾಡುವ ಅರಗಿಳಿಗಳ ಮಾತಾಡಿಸಿ ಮುದ್ದಾಡುವ
ಕಾಮನ ಬಿಲ್ಲೇರುವ ಜಾರುತ ನಾವಾಡುವ
ಹಗಲು ಇರುಳು ಒಂದಾಗಿ ಹಾಡುವ

[ಹೆಣ್ಣು]
ಜೊತೆಯಲಿ ಜೊತೆ ಜೊತೆಯಲಿ ಇರುವೆನು ಹೀಗೇ ಎಂದು
ಹೊಸ ಹರುಷವ ತರುವೆನು ಇನ್ನು ಎಂದು
[ಗಂಡು]
ಎಂಥ ಮಾತಾಡಿದೆ ಇಂದು ನೀ ಎಂಥ ಮಾತಾಡಿದೆ
ನನ್ನ ಮನಸಿನ ಭಾವನೆ ನೀನೆ ಹೇಳಿದೆ
ಜೊತೆಯಲಿ ಜೊತೆ ಜೊತೆಯಲಿ ಇರುವೆನು ಹೀಗೇ ಎಂದು