ಮುಂಗಾರು ಮಳೆ(೨೦೦೬)-ಮುಂಗಾರು ಮಳೆಯೇ
ಚಿತ್ರ: ಮುಂಗಾರು ಮಳೆ
ಹಾಡು: ಮುಂಗಾರು ಮಳೆಯೇ
ಸಂಗೀತ: ಮನೋ ಮೂರ್ತಿ
ಸಾಹಿತ್ಯ: ಯೋಗರಾಜ್ ಭಟ್
ಹಾಡಿದವರು: ಸೋನು ನಿಗಮ್
ವರ್ಷ: ೨೦೦೬
http://www.kannadaaudio.com/Songs/Moviewise/home/MungaruMale.php
ಮುಂಗಾರು ಮಳೆಯೇ..ಏನು ನಿನ್ನ ಹನಿಗಳ ಲೀಲೆ
ನಿನ್ನ ಮುಗಿಲ ಸಾಲೆ..ಧರೆಯ ಕೊರಳ ಪ್ರೇಮದ ಮಾಲೆ..ಸುರಿವ ಒಲುಮೆಯ ಜಡಿ ಮಳೆಗೆ..ಪ್ರೀತಿ ಮೂಡಿದೆ
ಯಾವ ಚಿಪ್ಪಿನಲ್ಲಿ..ಯಾವ ಹನಿಯು ಮುತ್ತಾಗುವುದೊ..ಒಲವು ಎಲ್ಲಿ ಕುಡಿ ಒಡೆಯುವುದೊ..ತಿಳಿಯದಾಗಿದೆ
ಮುಂಗಾರು ಮಳೆಯೇ..ಏನು ನಿನ್ನ ಹನಿಗಳ ಲೀಲೆ
----------------೧--------------------------
ಭುವಿ ಕೆನ್ನೆ ತುಂಬ..ಮುಗಿಲು ಸುರಿದ ಮುತ್ತಿನ ಗುರುತು
ನನ್ನ ಎದೆಯ ತುಂಬ..ಅವಳು ಬಂದ ಹೆಜ್ಜೆಯ ಗುರುತು..ಹೆಜ್ಜೆ ಗೆಜ್ಜೆಯ ಸವಿ ಸದ್ದು..ಪ್ರೇಮನಾದವೊ
ಎಳೆ ಮುಗಿಲಿನಲ್ಲಿ..ರಂಗು ಚೆಲ್ಲಿ ನಿಂತಳು ಅವಳು..ಬರೆದು ಹೆಸರ ಕಾಮನ ಬಿಲ್ಲು...ಏನು ಮೋಡಿಯೊ
ಮುಂಗಾರು ಮಳೆಯೇ..ಏನು ನಿನ್ನ ಹನಿಗಳ ಲೀಲೆ
----------------೨--------------------------
ಯಾವ ಹನಿಗಳಿಂದ..ಯಾವ ನೆಲವು ಹಸಿರಾಗುವುದೊ
ಯಾರ ಸ್ಪರ್ಷದಿಂದ..ಯಾರ ಮನವು ಹಸಿಯಾಗುವುದೊ..ಯಾರ ಉಸಿರಲ್ಯಾರ ಹೆಸರೊ..ಯಾರು ಬರೆದರೊ
ಯಾವ ಪ್ರೀತಿ ಹೂವು..ಯಾರ ಹೃದಯದಲ್ಲರಳುವುದೊ..ಯಾರ ಪ್ರೇಮ ಪೂಜೆಗೆ ಮುಡಿಪೊ..ಯಾರು ಬಲ್ಲರು
ಮುಂಗಾರು ಮಳೆಯೇ..ಏನು ನಿನ್ನ ಹನಿಗಳ ಲೀಲೆ
-----------------೩-------------------------
ಒಲವ ಚೆಂದಮಾಮ..ನಗುತ ಬಂದ ಮನದಂಗಳಕೆ
ಪ್ರೀತಿ ಬೆಳಕಿನಲ್ಲಿ..ಹೃದಯ ಹೊರಟಿದೆ ಮೆರವಣಿಗೆ..ಅವಳ ಪ್ರೇಮದೂರಿನ ಕಡೆಗೆ..ಪ್ರೀತಿ ಪಯಣವೊ
ಪ್ರಣಯದೂರಿನಲ್ಲಿ ಕಳೆದು ಹೋದ ಸುಖವ ಇಂದು..ಧನ್ಯನಾದೆ ಪಡೆದುಕೊಂಡು..ಹೊಸ ಜನ್ಮವೋ
ಮುಂಗಾರು ಮಳೆಯೇ..ಏನು ನಿನ್ನ ಹನಿಗಳ ಲೀಲೆ
Recent comments
13 weeks 3 days ago
14 weeks 14 hours ago
14 weeks 3 days ago
14 weeks 4 days ago
24 weeks 3 days ago
25 weeks 4 days ago
28 weeks 1 day ago
28 weeks 1 day ago
28 weeks 1 day ago
28 weeks 1 day ago