ಪಾರಿಜಾತ

ಭಾಷೆ ತೊಡಕು - ವೈದೇಹಿ

ಕವನ | ಪಾರಿಜಾತ | ಭಾವಗೀತೆ | ವೈದೇಹಿ (ಜಾನಕಿ ಶ್ರೀನಿವಾಸಮೂರ್ತಿ)

ಅಕ್ಕನಿಗೆ ಭಾಷೆ ಇದೆ
ಮಲ್ಲಿಕಾರ್ಜುನನಿಗಿಲ್ಲಾ
ಮೀರಾ ಭಜನೆ ಇದ್ದರು
ಗಿರಿಧರ ಮೂಕ
ಭಾಷೆ ಮೂಲಕವೇ ಆತ್ಮ ಮಿಲನಕೆ ಹೊರಟ
ಇಂತ ಧೀಮಂತೆಯರ ಅಂತಿಮ
ನೆಲೆಯ ಸುಖ ಸಖರಿಗಿರುವುದಿಲ್ಲಾ
ಭಾಷೆಲಿ ಸಿಲುಕದೆ ಜಾರಿಕೊಳ್ಳುವರು ಅವರು
ಜಾರರೆನ್ನಲು ಭಾಷೆ ತಡೆಯುತಿದೆ

ಆಕೆ ಆತ ಭಾಷೆ - ವೈದೇಹಿ

ಕವನ | ಪಾರಿಜಾತ | ವೈದೇಹಿ (ಜಾನಕಿ ಶ್ರೀನಿವಾಸಮೂರ್ತಿ)

ಅವಳೆಂದದ್ದು ಹಸಿವೆ ಮತ್ತು ಬಾಯಾರಿಕೆ
ಆತನೆಂದ ಚೆನ್ನಾಗಿ ಉಣ್ಣು ಕುಡಿ

ಆಕೆ ಅತ್ತಳು ಆಗ ಆತ ನಕ್ಕ
ಮೊನ್ನೆ ಅವನೆಂದದ್ದು ಕಿಟಕಿ ಎಂದು
ಅವಳು ತಿಳಕೊಂಡಂತೆ ಬಾಗಿಲು ಅಲ್ಲಾ

XML feed